ग्रन्थपरिचयः
by Admin · ಕನ್ನಡ
ಕನ್ನಡ
Featured
by Admin
ಶ್ರೀಮದಾಚಾರ್ಯರು ಹತ್ತು ಪ್ರಕರಣ ಗ್ರಂಥಗಳನ್ನು ರಚಿಸಿರುವರು. ಶಾಸ್ತ್ರದಲ್ಲಿನ ಒಂದು ಅಥವಾ ಎರಡು ಪ್ರಮೇಯಗಳನ್ನು ವಿಮರ್ಶಿಸುವ ಗ್ರಂಥವನ್ನುನ ಪ್ರಕರಣಗ್ರಂಥವೆಂದು ಕರೆಯುತ್ತಾರೆ. ಈ ಹತ್ತು ಪ್ರಕರಣಗಳಲ್ಲಿ ಶ್ರೀಮದ್ವಿಷ್ಣುತತ್ತ್ವವಿನಿರ್ಣಯವೂ ಒಂದು. ವಸ್ತುತಃ ಇಲ್ಲಿ ಹತ್ತಾರು ಪ್ರಮೇಯಗಳ ವಿಮರ್ಶೆಯು ಇದೆ. ಈ ವಿಷ್ಣುತತ್ತ್ವವಿನಿರ್ಣಯಕ್ಕೆ ವಿಸ್ತೃತವಾದ ಟೀಕೆಯನ್ನು ಟೀಕಾಚಾರ್ಯರೆಂದೇ ಪ್ರಸಿದ್ದರಾದ ಶ್ರೀಜಯತೀರ್ಥರು ರಚಿಸಿರುವರು. ಈ ವಿಷ್ಣುತತ್ತ್ವವಿನಿರ್ಣಯಕ್ಕೆ ಶ್ರೀಮನ್ನ್ಯಾಯಸುಧೆಯ ನಂತರದ ಸ್ಥಾನವೆಂದು ಪಂಡಿತರು ಅಭಿಮಿತಿಸುವರು. ಹಾಗಾಗಿಯೇ ಇದನ್ನು ಅಣುಸುಧಾ ಎಂದು ಕರೆಯುವರು. ಗ್ರಂಥದ ಹೆಸರೇ ತಿಳಿಸಿದಂತೆ ಈ ಗ್ರಂಥದಲ್ಲಿ ವಿಷ್ಣುವು ಸದಾಗಮಗಳಿಂದಲೇ ವೇದ್ಯ ಆಗಮಗಳು ಮುಖ್ಯವಾಗಿ ವಿಷ್ಣುವನ್ನೇ ಪ್ರತಿಪಾದಿಸುವವು, ವಿಷ್ಣುವು ಸಮಸ್ತ ಜಗದಿಂದ ಉತ್ಕೃಷ್ಟ, ನಾರಾಯಣನು ಸಕಲದೋಷಗಳಿಂದ ದೂರ ಎಂಬುವ ಪ್ರಮೇಯಗಳನ್ನು ಮಥಿಸಲಾಗಿದೆ. ಹಾಗೂ ಪ್ರಾಭಾಕರ, ಬೌದ್ಧ ಜೈನ, ನ್ಯಾಯ, ವೈಶಿಷಾಕಾದಿ ಮತಗಳ ವಿಮರ್ಶೆ ಇತ್ಯಾದಿ ಅನೇಕ ವಿಷಯಗಳ ಮಥನವನ್ನು ಇಲ್ಲಿ ಅತ್ಯಂತ ಮನಮಟ್ಟುವಂತೆ ನಡೆಸಲಾಗಿದೆ.
ಬುದ್ಧ ಜಿನ ಮುಂತಾದವರ ವಚನಗಳಿಂದಲೇ ಧರ್ಮಾದಿಗಳ ನಿಶ್ಚಯವಾಗಬಹುದಲ್ಲವೆ, ಧರ್ಮಾದಿಗಳ ನಿಶ್ಚಯಕ್ಕಾಗಿ ಅಪೌರುಪೇಯ ವೇದಗಳ ಅಗತ್ಯವೇನು ? ಎಂಬ ಜಿಜ್ಞಾಸೆಗೆ ಜಯತೀರ್ಥರು ಉತ್ತರಿಸುವರು. ಪುರುಷಾಣಾಂ ಬಹುಲಮಜ್ಞಾನವಿಪ್ರಲಂಭಾದ್ಯುಪಲಂಭೇನ ತೇಷ್ವಪಿತತ್ ಸಂಭಾವನಯಾ ಆಶ್ವಾಸಾನುಪಪತ್ತೇಃ” ಪ್ರಾಯಿಕವಾಗಿ ಪುರುಷರಲ್ಲಿ ಅಜ್ಞಾನ ಮೋಸಗಾರಿಕೆ ಮುಂತಾದವು ಕಂಡಿವೆ, ಹಾಗಾಗಿ ಬುದ್ಧಾದಿಗಳ ಮಾತಿನಲ್ಲೂ ನಮಗೆ ವಿಶ್ವಾಸವು ಬಾರದು. ಹಾಗಾಗಿ ಇಂತಹ ಸಂದೇಹಕ್ಕೆ ಎಡೆ ಇರದ ಮಾತು ಅಪೌರುಪೇಯವಾದ ವೇದಗಳ ವಚನ. ಇವುಗಳಿಂದಲೇ ಧರ್ಮಾದಿನಿಶ್ಚಯವೆಂಬ ಅನುಭವಕ್ಕೆ ಹತ್ತಿರದ ಮಾತನ್ನಾಡಿರುವರು. ಅಧ್ಯೇತೃಗಳಿಗೆ ಮುದವನ್ನೀಡುವ ವಾದದ ಸರಣಿ, ವಾಕ್ಯಗಳ ಜೊಡನೆ, ಪರಶಾಸ್ತ್ರದ ಅನುವಾದ, ಆಚಾರ್ಯರ ಮಾತಿನ ಭಾವದ ಅವಿಷ್ಕರಣೆ ಇತ್ಯಾದಿ ಟೀಕೆಯ ಸಕಲಗುಣಗಳಿಂದ ಗುಂಫಿತವಾದ ಕೃತಿಯು ಇದು.
ಸಂಪಾದಕರು : ವಿದ್ವಾನ್ ಕೃಷ್ಣಾಚಾರ್ಯ ಬಿದರಹಳ್ಳಿ
ಶ್ರೀಯುತ ಕೃಷ್ಣಾಚಾರ್ಯರು ನಾಡಿನ ಪ್ರಸಿದ್ಧ ಗುರುಕುಲಾವದ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಶಾಸ್ತ್ರಾಧ್ಯಯನವನ್ನು ನಡೆಸಿರುವರು. ಈ ಶತಮಾನದ ಗಣ್ಯಾತಿಗಣ್ಯಸಂತರಾದ ಶ್ರೀಶ್ರೀವಿಶ್ವೇತೀರ್ಥರಲ್ಲಿ ಶ್ರೀಮನ್ನ್ಯಾಯಸುಧಾಧ್ಯಯನವನ್ನು ನಡೆಸಿ ಗುರುಗಳ ವಿಶೇಷ ಕೃಪೆಗೆ ಪಾತ್ರರಾದವರು. ಹತ್ತಾರು ವರ್ಷದ ಪಾಠ ಪ್ರವಚನ ಗ್ರಂಥರಚನೆ ಹಾಗೂ ಗ್ರಂಥಗಳ ಅನುವಾದದ ಅನುಭವವು ಇವರಲ್ಲಿದೆ.
ಕೃಷ್ಣಾಚಾರ್ಯರು ಪ್ರಸಿದ್ಧ ಟಿಪ್ಪಣಿಕಾರರಾದ ಬಿದರಹಳ್ಳಿ ಶ್ರೀನಿವಾಸತೀರ್ಥರ ವಂಶದವರು. ಇವರ ತಂದೆ ಬಿದರಹಳ್ಳಿ ಶ್ರೀನಿವಾಸಚಾರ್ಯರೂ ಶ್ರೇಷ್ಠ ವಿದ್ವಾಂಸರು, ಅತ್ಯಂತ ಆಚಾರಶೀಲರು. ಬಾಲ್ಯಾವಸ್ಥೆಯಲ್ಲಿ ಪ್ರಾಥಮಿಕ ಶಾಸ್ತ್ರಪಾಠಗಳನ್ನು ನಮಗೆ ಮಾಡಿದ್ದರು. ಕೃಷ್ಣಾಚಾರ್ಯರು ಅನೇಕ ಟಿಪ್ಪಣಿಗಳನ್ನು ಪರಿಶೀಲಿಸಿ ಟೀಕೆಯ ಭಾವವು ಸುಲಭವಾಗಿ ಅಧ್ಯೇತೃಗಳಿಗೆ ಮನದಟ್ಟಾಗುವಂತೆ ಅನುವಾದಿಸಿದ್ದಾರೆ.
Inclusive of all taxes

No table of contents has been added for this language yet.
No reviews yet.
ಕನ್ನಡ
Listed author for this volume. For more works, browse the publications catalogue or contact the institution.
View publications →