ग्रन्थपरिचयः

ವ್ಯುತ್ಪತ್ತಿವಾದ ಗೂಢಾರ್ಥತತ್ತ್ವಾಲೋಕ ಹಾಗೂ ಅರ್ಥದೀಪಿಕಾ ವ್ಯಾಖ್ಯಾನಗಳೊಂದಿಗೆ

by Śrī Gadādhara Bhaṭṭācārya · 2026 · संस्कृतम्

संस्कृतम्

ವ್ಯುತ್ಪತ್ತಿವಾದ ಗೂಢಾರ್ಥತತ್ತ್ವಾಲೋಕ ಹಾಗೂ ಅರ್ಥದೀಪಿಕಾ ವ್ಯಾಖ್ಯಾನಗಳೊಂದಿಗೆ

by Śrī Gadādhara Bhaṭṭācārya

(5.0 · 7003 reviews) Out of Stock
ವ್ಯುತ್ಪತ್ತಿವಾದವು ನವ್ಯನ್ಯಾಯ ಪರಂಪರೆಯ ಮಹಾನ್ ತರ್ಕಶಾಸ್ತ್ರಜ್ಞರಾದ ಶ್ರೀ ಗದಾಧರ ಭಟ್ಟಾಚಾರ್ಯರು ವಿರಚಿತವಾದ ಶಾಬ್ದಬೋಧಶಾಸ್ತ್ರದ ಪ್ರಮುಖ ಗ್ರಂಥವಾಗಿದೆ. ಪದದಿಂದ ಅರ್ಥಜ್ಞಾನ ಹೇಗೆ ಉಂಟಾಗುತ್ತದೆ, ಶಬ್ದಬೋಧದ ಪ್ರಕ್ರಿಯೆ ಯಾವುದು, ವಾಕ್ಯಾರ್ಥಸಿದ್ಧಿಗೆ ಅಗತ್ಯವಾದ ತತ್ತ್ವಗಳು ಯಾವುವು ಎಂಬುದನ್ನು ಅತ್ಯಂತ ಸೂಕ್ಷ್ಮ…

Pages

428

Language

sanskrit

Publisher

Sri Vyasatirtha Samshodhana Prathisthanam

Edition

First

Binding

Perfect Binding

₹ 500

Inclusive of all taxes

This book is currently out of stock. Please check back later or contact us for availability.

About this book

ವ್ಯುತ್ಪತ್ತಿವಾದವು ನವ್ಯನ್ಯಾಯ ಪರಂಪರೆಯ ಮಹಾನ್ ತರ್ಕಶಾಸ್ತ್ರಜ್ಞರಾದ ಶ್ರೀ ಗದಾಧರ ಭಟ್ಟಾಚಾರ್ಯರು ವಿರಚಿತವಾದ ಶಾಬ್ದಬೋಧಶಾಸ್ತ್ರದ ಪ್ರಮುಖ ಗ್ರಂಥವಾಗಿದೆ. ಪದದಿಂದ ಅರ್ಥಜ್ಞಾನ ಹೇಗೆ ಉಂಟಾಗುತ್ತದೆ, ಶಬ್ದಬೋಧದ ಪ್ರಕ್ರಿಯೆ ಯಾವುದು, ವಾಕ್ಯಾರ್ಥಸಿದ್ಧಿಗೆ ಅಗತ್ಯವಾದ ತತ್ತ್ವಗಳು ಯಾವುವು ಎಂಬುದನ್ನು ಅತ್ಯಂತ ಸೂಕ್ಷ್ಮವಾದ ನವ್ಯನ್ಯಾಯಶೈಲಿಯಲ್ಲಿ ಈ ಗ್ರಂಥವು ನಿರೂಪಿಸುತ್ತದೆ. ಆದಕಾರಣ ನವ್ಯನ್ಯಾಯ, ವ್ಯಾಕರಣ, ಮೀಮಾಂಸಾ, ವೇದಾಂತ ಹಾಗೂ ಭಾರತೀಯ ಭಾಷಾತತ್ತ್ವಶಾಸ್ತ್ರದ ಅಧ್ಯಯನದಲ್ಲಿ ಈ ಕೃತಿ ವಿಶಿಷ್ಟ ಸ್ಥಾನವನ್ನು ಪಡೆದಿದೆ.

ಶ್ರೀ ವ್ಯಾಸತೀರ್ಥ ಮಠಾಧೀಶರಾದ ಪರಮಪೂಜ್ಯ ಶ್ರೀಮದ್ ವಿದ್ಯಾಶ್ರೀಶತೀರ್ಥ ಶ್ರೀಪಾದಂಗಳವರ ಆದೇಶ ಹಾಗೂ ಅನುಗ್ರಹದಂತೆ ಈ ಮಹತ್ವದ ಗ್ರಂಥವನ್ನು ಪುನಃ ಪ್ರಕಟಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಗಾಢವಾದ ನವ್ಯನ್ಯಾಯ ಪದ್ಧತಿಯಲ್ಲಿ ರಚಿತವಾಗಿರುವ ಈ ಗ್ರಂಥವು ಶಬ್ದಬೋಧದ ಸೂಕ್ಷ್ಮ ಪ್ರಕ್ರಿಯೆಯನ್ನು ಸಮಗ್ರವಾಗಿ ಅರಿಯಬಯಸುವ ಅಧ್ಯಾಪಕರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳಿಗೆ ಅತ್ಯಂತ ಅವಶ್ಯಕವಾದ ಅಧ್ಯಯನಗ್ರಂಥವಾಗಿದೆ.

ಈ ಆವೃತ್ತಿಯಲ್ಲಿ ಮೂಲಗ್ರಂಥವಾದ ವ್ಯುತ್ಪತ್ತಿವಾದದೊಂದಿಗೆ ಮಹಾಮಹೋಪಾಧ್ಯಾಯ ಧರ್ಮದತ್ತ ಝಾ ವಿರಚಿತವಾದ ‘ಗೂಢಾರ್ಥತತ್ತ್ವಾಲೋಕ’ ವ್ಯಾಖ್ಯಾನ ಹಾಗೂ ಅದರ ಮೇಲೆ ಶ್ರೀ ಶಶಿನಾಥ ಝಾ ಶರ್ಮಾ ವಿರಚಿತವಾದ ‘ಅರ್ಥದೀಪಿಕಾ’ ಉಪವ್ಯಾಖ್ಯಾನವನ್ನು ಒಳಗೊಂಡಿದೆ. ಈ ಎರಡೂ ವ್ಯಾಖ್ಯಾನಗಳು ಮೂಲಗ್ರಂಥದಲ್ಲಿರುವ ಗಹನ ತಾತ್ತ್ವಿಕ ವಿಚಾರಗಳು, ನವ್ಯನ್ಯಾಯ ಪರಿಭಾಷೆಗಳು ಹಾಗೂ ಶಾಬ್ದಬೋಧದ ಸೂಕ್ಷ್ಮ ವಿಶ್ಲೇಷಣೆಯನ್ನು ಸ್ಪಷ್ಟವಾಗಿ ವಿವರಿಸಿ, ಅಧ್ಯೇತರಿಗೆ ವಿಷಯವನ್ನು ಆಳವಾಗಿ ಗ್ರಹಿಸಲು ನೆರವಾಗುತ್ತವೆ.

ಬಹುಕಾಲದಿಂದ ಅಲಭ್ಯವಾಗಿದ್ದ ಈ ಅಪೂರ್ವ ಗ್ರಂಥವನ್ನು ಇದೀಗ ಪುನರ್ಮುದ್ರಿಸಿ ವಿದ್ವಾಂಸರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳ ಅಧ್ಯಯನಕ್ಕೆ ಲಭ್ಯವಾಗುವಂತೆ ಮಾಡಲಾಗಿದೆ. ಇದು ಭಾರತೀಯ ತರ್ಕಶಾಸ್ತ್ರ ಮತ್ತು ಭಾಷಾತತ್ತ್ವದ ಅಧ್ಯಯನಕ್ಕೆ ಅಮೂಲ್ಯ ಕೊಡುಗೆಯಾಗಿದೆ.

ಈ ಕೃತಿಯನ್ನು ವಿದ್ವಾನ್ ಕೆ. ವಿ. ಪ್ರಸನ್ನಾಚಾರ್ಯರು ವಿವಿಧ ಮುದ್ರಿತ ಪ್ರತಿಗಳು ಹಾಗೂ ಲಭ್ಯ ಮೂಲಗಳನ್ನು ಪರಿಶೀಲಿಸಿ ಶಾಸ್ತ್ರೀಯವಾಗಿ ಸಂಪಾದಿಸಿದ್ದಾರೆ. ಶ್ರೀ ವ್ಯಾಸತೀರ್ಥ ಸಂಶೋಧನ ಪ್ರತಿಷ್ಠಾನ ಪ್ರಕಟಿಸಿರುವ ಈ ಗ್ರಂಥವು ನವ್ಯನ್ಯಾಯ ಹಾಗೂ ಶಾಬ್ದಬೋಧಶಾಸ್ತ್ರದ ಅಧ್ಯಯನಕ್ಕೆ ಅತ್ಯಂತ ಪ್ರಾಮಾಣಿಕ ಮತ್ತು ಉಪಯುಕ್ತ ಆಕರಗ್ರಂಥವಾಗಿದೆ.

ಗ್ರಂಥದ ಮುಖ್ಯಾಂಶಗಳು
ಶ್ರೀ ಗದಾಧರ ಭಟ್ಟಾಚಾರ್ಯರ ವ್ಯುತ್ಪತ್ತಿವಾದ
ಮಹಾಮಹೋಪಾಧ್ಯಾಯ ಧರ್ಮದತ್ತ ಝಾ ವಿರಚಿತ ‘ಗೂಢಾರ್ಥತತ್ತ್ವಾಲೋಕ’ ವ್ಯಾಖ್ಯಾನ
ಶ್ರೀ ಶಶಿನಾಥ ಝಾ ಶರ್ಮಾ ವಿರಚಿತ ‘ಅರ್ಥದೀಪಿಕಾ’ ಉಪವ್ಯಾಖ್ಯಾನ
ನವ್ಯನ್ಯಾಯದ ಶಾಬ್ದಬೋಧಸಿದ್ಧಾಂತದ ಸಮಗ್ರ ನಿರೂಪಣೆ
ಬಹುಕಾಲದ ನಂತರದ ಶಾಸ್ತ್ರೀಯ ಪುನರ್ಮುದ್ರಣ
ವಿದ್ವಾನ್ ಕೆ. ವಿ. ಪ್ರಸನ್ನಾಚಾರ್ಯರು ಸಂಪಾದಿಸಿದ ವಿಮರ್ಶಾತ್ಮಕ ಆವೃತ್ತಿ
ನವ್ಯನ್ಯಾಯ, ಮೀಮಾಂಸಾ, ವ್ಯಾಕರಣ, ವೇದಾಂತ ಹಾಗೂ ಸಂಸ್ಕೃತ ತತ್ತ್ವಶಾಸ್ತ್ರದ ಅಧ್ಯೇತರಿಗೆ ಅನಿವಾರ್ಯ ಅಧ್ಯಯನಗ್ರಂಥ