ग्रन्थपरिचयः
by Vid.Kambaluru Srivatsacharya · 2026 · ಕನ್ನಡ
ಕನ್ನಡ
Featured
by Vid.Kambaluru Srivatsacharya
Inclusive of all taxes
ಪಾಂಚರಾತ್ರಾದಿ ಆಗಮಗಳಲ್ಲಿ ಪ್ರತಿಪಾದಿಸಿರುವಂತೆ ದೇವಪೂಜೆಯು ಭಗವದನುಗ್ರಹವನ್ನು ಪಡೆಯುವ ಪ್ರಮುಖ ಸಾಧನವಾಗಿದೆ. “ನ ದೇವಾ ಮೃಚ್ಛಿಲಾಮಯಾಃ” ಎಂದು ಶ್ರೀಮದ್ಭಾಗವತವು ಪ್ರತಿಪಾದಿಸಿರುವಂತೆ, ದೇವರು ಮಣ್ಣು ಅಥವಾ ಕಲ್ಲಿನ ಮೂರ್ತಿಮಾತ್ರನಲ್ಲ; ಪ್ರತಿಷ್ಠಿತ ವಿಗ್ರಹದಲ್ಲಿ ಸ್ವಯಂ ಭಗವಂತನೇ ಸನ್ನಿಹಿತನಾಗಿರುತ್ತಾನೆ. ಆದ್ದರಿಂದ ಪ್ರತಿಮಾರಾಧನೆಯ ಸಂದರ್ಭದಲ್ಲಿ ಗೋಲಕತ್ರಯದ ಚಿಂತನೆ ಅತ್ಯಂತ ಅವಶ್ಯಕವಾಗಿದೆ. ಈ ಭಾವನೆಯೊಂದಿಗೆ ತಂತ್ರಸಾರೋಕ್ತ ವಿಧಾನವನ್ನು ಅನುಸರಿಸಿ ದೇವಪೂಜೆಯನ್ನು ಆಚರಿಸಿದಲ್ಲಿ ಭಗವದನುಗ್ರಹಕ್ಕೆ ಪಾತ್ರರಾಗಬಹುದು.
ಈ ಹೊತ್ತಿಗೆಯು ಶ್ರೀವ್ಯಾಸರಾಜಮಠದ ಸಂಪ್ರದಾಯಾನುಸಾರ ದೇವಪೂಜೆಯನ್ನು ಆಚರಿಸಲು ಮಾರ್ಗದರ್ಶಕ ಗ್ರಂಥವಾಗಿದೆ. ಶ್ರೀಮಠದಲ್ಲಿ ಪರಂಪರೆಯಿಂದ ಅನುಸರಿಸಿಕೊಂಡು ಬಂದಿರುವ ಅನೇಕ ಸೂಕ್ಷ್ಮಾಚಾರಗಳು, ಪುರಾತನ ಸಂಪ್ರದಾಯಗಳಿಂದ ಬಂದ ವಿಶೇಷ ವಿಧಾನಗಳು ಹಾಗೂ ಯೋಗದೀಪಿಕಾ ಮೊದಲಾದ ಪ್ರಮಾಣಗ್ರಂಥಗಳಲ್ಲಿ ಉಪದಿಷ್ಟವಾದ ಪ್ರಮುಖ ವಿಚಾರಗಳನ್ನು ಒಳಗೊಂಡಿರುವ ಈ ಕೃತಿಯು, ಅರ್ಚಕರು, ಅಧ್ಯೇತೃಗಳು ಹಾಗೂ ಭಕ್ತರಿಗೆ ಅತ್ಯಂತ ಉಪಯುಕ್ತವಾದ ಮಾರ್ಗದರ್ಶಿಯಾಗಿದೆ.
ಸಂಪಾದಕರು : ವಿದ್ವಾನ್ ಕಂಬಾಲೂರು ಶ್ರೀವತ್ಸಾಚಾರ್ಯ
ವಿದ್ವಾನ್ ಕಂಬಾಲೂರು ಶ್ರೀವತ್ಸಾಚಾರ್ಯರು ಶ್ರೀವ್ಯಾಸರಾಜಮಠದ ಶಿಷ್ಯರಾಗಿದ್ದು, ಶಾಸ್ತ್ರಪಾಂಡಿತ್ಯ ಹಾಗೂ ಆಚಾರನಿಷ್ಠೆಗಳಿಂದ ಪ್ರಸಿದ್ಧರಾದ ವಿದ್ವಾಂಸರಾಗಿದ್ದಾರೆ. ಶ್ರೀಮಠದ ಅನೇಕ ಸತ್ಸಂಪ್ರದಾಯಗಳು, ಆರಾಧನಾಕ್ರಮಗಳು ಹಾಗೂ ಆಗಮಪರಂಪರೆಯ ಬಗ್ಗೆ ಆಳವಾದ ಅಧ್ಯಯನವನ್ನು ಹೊಂದಿರುವ ಅವರು, ಅನೇಕ ಪ್ರಾಚೀನ ಗ್ರಂಥಗಳನ್ನು ಪರಿಶೀಲಿಸಿ, ಪ್ರಮಾಣಬದ್ಧವಾಗಿ ಈ ಹೊತ್ತಿಗೆಯನ್ನು ಸಿದ್ಧಪಡಿಸಿದ್ದಾರೆ. ಅವರ ಶ್ರದ್ಧೆ, ಪರಿಶ್ರಮ ಮತ್ತು ವಿದ್ವತ್ತಿನ ಫಲವಾಗಿ ಈ ಕೃತಿ ಶ್ರೀವ್ಯಾಸರಾಜಮಠದ ಪೂಜಾಪರಂಪರೆಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ತಲುಪಿಸುವ ಅಮೂಲ್ಯ ಗ್ರಂಥವಾಗಿದೆ.
No table of contents has been added for this language yet.
5.0
10000 reviews
Customer reviews
Verified buyers can rate and comment after a successful purchase. Guests can read public reviews below.
Sign in to write a review after purchasing this book.
Sign in to review →No customer reviews yet. Be the first after purchasing this book.
ಕನ್ನಡ
Listed author for this volume. For more works, browse the publications catalogue or contact the institution.
View publications →Page visits and catalogue signals for this publication.
Total visits
38
All-time page views
Last 7 days
19
Unique daily visits
Last 30 days
38
Unique daily visits
Unique visitors
38
Distinct browsers
Copies sold
12
Paid orders
Rating
5.0★
10000 reviews
Availability
In stock
Current status
Visits are counted once per visitor per day. Totals grow as readers open this page.